News
ಈ ಕಂತಿನಲ್ಲಿ ಸನ್ಯಾಸಿ ವೇಷದಲ್ಲಿ ಬಂದ ಅರ್ಜುನ-ಸುಭದ್ರೆಯನ್ನು ಕರೆದುಕೊಂಡು ರಾತ್ರೋರಾತ್ರಿ ದ್ವಾರಕೆಯಿಂದ ಹೊರಡುತ್ತಾರೆ. ಸನ್ಯಾಸಯಿಂದ ಅಕೃತ್ಯವಾಯಿತೆಂದು ಊರೆಲ್ಲಾ ಸುದ್ದಿಯಾಗಿ ಹೋಗುತ್ತದೆ. ಬಲರಾಮನ ಕೋಪವನ್ನು ತಣಿಸಲು ಯತ್ನಿಸುವ ಕೃಷ್ಣ, ಯುದ್ಧ ಮಾಡುವುದು ವ್ಯರ್ಥ ಎನ್ನುತ್ತಾನೆ. ಗೊಲ್ಲತಿಯಾಗಿ ಇಂದ್ರಪ್ರಸ್ತ ಪ್ರವೇಶಿಸಬೇಕೆಂದು ಅರ್ಜುನ ಸುಭದ್ರೆಗೆ ಹೇಳುತ್ತಾನೆ. ಇಲ್ಲವಾದರೆ ದ್ರೌಪದಿಯನ್ನು ಎದುರಿಸುವುದು ಕಷ್ಟ ಎಂದು ಎಚ್ಚರಿಸುತ್ತಾನೆ. ಅವನು ಹೇಳಿದಂತೆ ಮಾಡುವುದಾಗಿ ಸುಭದ್ರೆ ಒಪ್ಪುವಳು. ಮುಂದೇನಾಯಿತು ಕೇಳಿ. ಗದುಗಿನ ಭಾರತ ೨.೦ “ಕುಮಾರವ್ಯಾಸ ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು’’ ಎಂದು ಕುವೆಂಪು ಕುಮಾರವ್ಯಾಸ ಕಾವ್ಯ ಶಕ್ತಿಯನ್ನು ಹೊಗಳಿಸಿದ್ದಾರೆ. ಗದುಗಿನ ಭಾರತ, ಕನ್ನಡ ಭಾರತ ಎಂದು ಕರೆಸಿಕೊಳ್ಳುವ ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿ ಕನ್ನಡದ ಜನಪದವಾಗಿ ಹಾಸುಹೊಕ್ಕಾಗಿರುವ ಕೃತಿ. ಗಮಕಗಳ ಮೂಲಕ ಚಿರಪರಿಚಿತವಾಗಿರುವ ಈ ಕನ್ನಡ ಭಾರತದ ಭಿನ್ನ ಓದನ್ನು ಹೊಸತಲೆಮಾರಿಗೆ ಹನೂರರು ತಲುಪಿಸಲಿದ್ದಾರೆ. ಕೃಷ್ಣಮೂರ್ತಿ ಹನೂರು ಕನ್ನಡದ ಪ್ರಮುಖ ಜಾನಪದ ತಜ್ಞ. ಕರ್ನಾಟಕದ ವಿವಿಧ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇವೆ. ಮೈಸೂರು ವಿವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸುಮಾರು ೧೩ ವರ್ಷಗಳ ಕಾಲ ಹಳೆಗನ್ನಡ ಪಠ್ಯಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸಿದ್ದಾರೆ. ಜನಪದ ಅಧ್ಯಯನಕ್ಕೊಂದು ಶಿಸ್ತಿನ ಚೌಕಟ್ಟು ತಂದವರು.